ಸ್ನಾನವನ್ನು ಮಾಡುವಾಗ ಪಠಿಸಬೇಕಾದ ಶ್ಲೋಕಗಳು


 ಅ.    ಗಂಗೆ ಚ ಯಮುನೆ ಚೈವ ಗೋದಾವರಿ ಸರಸ್ವತಿ|
    ನರ್ಮದೆ ಸಿಂಧುಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು||
        - ನಾರದಪುರಾಣ, ಪೂರ್ವಭಾಗ, ಪಾದ ೧, ಅಧ್ಯಾಯ ೨೭, ಶ್ಲೋಕ ೩೩

ಅರ್ಥ: ಹೇ ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದೆ, ಸಿಂಧು ಮತ್ತು ಕಾವೇರಿ ನದಿಗಳೇ ನೀವೆಲ್ಲರೂ ನನ್ನ ಸ್ನಾನದ ನೀರಿನಲ್ಲಿ ಬನ್ನಿರಿ.

ಆ.    ಗಂಗಾ ಸಿಂಧು ಸರಸ್ವತಿ ಚ ಯಮುನಾ ಗೋದಾವರಿ ನರ್ಮದಾ|
    ಕಾವೇರಿ ಶರಯೂ ಮಹೇಂದ್ರತನಯಾ ಚರ್ಮಣ್ವತಿ ವೇದಿಕಾ||
    ಕ್ಷಿಪ್ರಾ ವೇತ್ರವತಿ ಮಹಾಸುರನದೀ ಖ್ಯಾತಾ ಜಯಾ ಗಂಡಕೀ|
    ಪೂರ್ಣಾಃ ಪೂರ್ಣಜಲೈಃ ಸಮುದ್ರಸಹಿತಾಃ ಕುರ್ವಂತು ಮೇ ಮಂಗಲಮ್||

ಅರ್ಥ: ಗಂಗಾ, ಸಿಂಧು, ಸರಸ್ವತೀ, ಯಮುನಾ, ನರ್ಮದಾ, ಗೋದಾವರಿ, ಕಾವೇರಿ, ಶರಯೂ, ಮಹೇಂದ್ರತನಯಾ, ಚಂಬಳಾ, ವೇದಿಕಾ, ಕ್ಷಿಪ್ರಾ, ವೇತ್ರವತಿ (ಮಾಳವ್ಯಾದಲ್ಲಿರುವ ಬೆತವಾ ನದಿ) ಪ್ರಖ್ಯಾತ ಮಹಾಸುರನದಿ, ಜಯಾ ಮತ್ತು ಗಂಡಕಿ ನದಿಗಳು ಪವಿತ್ರ ಮತ್ತು ಪರಿಪೂರ್ಣರಾಗಿ ಸಮುದ್ರಸಹಿತ ನನ್ನ ಕಲ್ಯಾಣವನ್ನು ಮಾಡಲಿ.

ಇ.    ನಮಾಮಿ ಗಂಗೆ ತವ ಪಾದ ಪಂಕಜಂ ಸುರಾಸುರೈರ್ವಂದಿತದಿವ್ಯರೂಪಮ್|
    ಭುಕ್ತಿಂ ಚ ಮುಕ್ತಿಂ ಚ ದದಾಸಿ ನಿತ್ಯಂ ಭಾವಾನುಸಾರೇಣ ಸದಾ ನರಾಣಾಮ್||

ಅರ್ಥ: ಎಲ್ಲ ಐಹಿಕ ಸುಖ, ಭೋಗ ಮತ್ತು ಮೋಕ್ಷವನ್ನು ನೀಡುವಂತಹ ಹೇ ಗಂಗಾ ಮಾತೆಯೇ, ಪ್ರತಿಯೊಬ್ಬರ ಭಾವಕ್ಕನುಸಾರ ನಿನ್ನ ಯಾವ ಚರಣಕಮಲಗಳು ಎಲ್ಲ ದೇವರು ಮತ್ತು ದೈತ್ಯರಿಗೆ ವಂದನೀಯವಾಗಿವೆಯೋ, ಇಂತಹ ನಿನ್ನ ಚರಣಗಳಿಗೆ ನಾನು ವಂದಿಸುತ್ತೇನೆ.

ಈ.    ಗಂಗಾ ಗಂಗೇತಿ ಯೋ ಬ್ರೂಯಾತ್ ಯೋಜನಾನಾಂ ಶತೈರಪಿ|
    ಮುಚ್ಯತೆ ಸರ್ವಪಾಪೇಭ್ಯೋ ವಿಷ್ಣುಲೋಕಂ ಸ ಗಚ್ಛತಿ|| ತೀರ್ಥರಾಜಾಯ ನಮಃ|

ಅರ್ಥ: ಸಾವಿರಾರು ಮೈಲು (ಯೋಜನಗಳು) ದೂರದಿಂದ ಯಾವನು ‘ಗಂಗಾ, ಗಂಗಾ, ಗಂಗಾ’, ಎಂದು ಗಂಗೆಯ ಸ್ಮರಣೆಯನ್ನು ಮಾಡುತ್ತಾನೆಯೋ, ಅವನು ಎಲ್ಲ ಪಾಪಗಳಿಂದ ಮುಕ್ತನಾಗಿ ವಿಷ್ಣುಲೋಕಕ್ಕೆ ಹೋಗುತ್ತಾನೆ.

ಉ.    ಪಾಪೋಹಂ ಪಾಪಕರ್ಮಾಹಂ ಪಾಪಾತ್ಮಾ ಪಾಪಸಂಭವಃ|
        ತ್ರಾಹಿ ಮಾಂ ಕೃಪಯಾ ಗಂಗೆ ಸರ್ವಪಾಪಹರಾ ಭವ||

ಅರ್ಥ: ನಾನು ಕೆಟ್ಟ ಕರ್ಮಿಯಾಗಿದ್ದೇನೆ. ನಾನು ಸಾಕ್ಷಾತ್ ಪಾಪ ಅಂದರೆ ಕೆಟ್ಟ ಪಾಪಿಯೇ ಆಗಿದ್ದೇನೆ. ನಾನು ಕೆಟ್ಟದರಿಂದಲೇ ನಿರ್ಮಾಣವಾಗಿದ್ದೇನೆ. ಹೇ ಗಂಗಾ ಮಾತೆಯೇ, ನೀನು ನನ್ನ ಪಾಪಗಳನ್ನು ಪರಿಹರಿಸಿ ನನ್ನ ರಕ್ಷಣೆಯನ್ನು ಮಾಡು.

ನಾಮಜಪ ಮಾಡುತ್ತಾ ಅಥವಾ ಶ್ಲೋಕವನ್ನು ಹೇಳುತ್ತಾ ಸ್ನಾನ ಮಾಡುವುದರ ಮಹತ್ವ

ಶಾಸ್ತ್ರ: ನಾಮಜಪ ಮಾಡುತ್ತಾ ಅಥವಾ ಶ್ಲೋಕವನ್ನು ಹೇಳುತ್ತಾ ಸ್ನಾನವನ್ನು ಮಾಡುವುದರಿಂದ ನೀರಿನಲ್ಲಿರುವ ಚೈತನ್ಯವು ಜಾಗೃತವಾಗಿ ದೇಹಕ್ಕೆ ಅದರ ಸ್ಪರ್ಶವಾಗಿ ಚೈತನ್ಯವು ಅಣುರೇಣುಗಳಲ್ಲಿ ಸಂಕ್ರಮಣವಾಗುತ್ತದೆ ಮತ್ತು ಇದರಿಂದ ದೇಹಕ್ಕೆ ದೇವತ್ವವು ಪ್ರಾಪ್ತವಾಗಿ ದಿನವಿಡೀ ಮಾಡುವ ಕೃತಿಗಳನ್ನು ಚೈತನ್ಯದ ಸ್ತರದಲ್ಲಿ ಮಾಡಲು ದೇಹವು ಸಕ್ಷಮವಾಗುತ್ತದೆ.
- ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೩೦.೧೦.೨೦೦೭, ಮಧ್ಯಾಹ್ನ ೧.೨೩)

(ಆಧಾರ - ಸನಾತನ ಸಂಸ್ಥೆಯ ಗ್ರಂಥ 'ದಿನಚರಿಗೆ ಸಂಬಂಧಿತ ಆಚಾರಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ')

ಆಚಾರಧರ್ಮದ ಇತರ ವಿಷಯಗಳು
ಸ್ನಾನದ ನೀರಿನಲ್ಲಿ ಒಂದು ಚಮಚ ಕಲ್ಲುಪ್ಪನ್ನು ಏಕೆ ಹಾಕಬೇಕು?
ರಾತ್ರಿಯ ಸಮಯದಲ್ಲಿ ಕನ್ನಡಿಯನ್ನು ಏಕೆ ನೋಡಬಾರದು?
ಟಿಕಲಿಯನ್ನು ಹಚ್ಚಿಕೊಳ್ಳುವುದಕ್ಕಿಂತ ಕುಂಕುಮ ಹಚ್ಚಿಕೊಳ್ಳುವುದು ಏಕೆ ಯೋಗ್ಯ?
ಕೂದಲನ್ನು ಹಾಗೇ ಬಿಟ್ಟುಕೊಂಡು ಏಕೆ ಹೊರಗೆ ಹೋಗಬಾರದು?
ಕಿವಿಗಳ ಅಂಚಿನಲ್ಲಿ ಒಂದಕ್ಕಿಂತ ಹೆಚ್ಚು ರಂಧ್ರಗಳನ್ನು ಮಾಡುವುದರಿಂದಾಗುವ ಹಾನಿ!
ವಾಸ್ತು ಸ್ವಚ್ಛವಾಗಿರಲು ಆಚಾರಧರ್ಮ ಪಾಲಿಸಿ!
ಹಬ್ಬದಂದು ಹೊಸ ಅಥವಾ ರೇಷ್ಮೆ ಬಟ್ಟೆ ಧರಿಸುವುದರಿಂದಾಗುವ ಲಾಭಗಳು
ಬಾಳೆಯ ಎಲೆಯನ್ನು ಇಡುವ ಪದ್ಧತಿ
ಕೂದಲುಗಳ ಮೂಲಕ ಹೇಗೆ ಮಾಟ ಮಾಡುತ್ತಾರೆ?
ಗ್ರಹಣಕಾಲದಲ್ಲಿ ಆಹಾರವನ್ನು ಏಕೆ ಸೇವಿಸಬಾರದು?
ವಾಸ್ತುದೋಷವನ್ನು ದೂರಗೊಳಿಸುವ ಸುಲಭ ಪದ್ಧತಿಗಳು
ಯಜ್ಞದಲ್ಲಿ ಆಹುತಿ ನೀಡುವುದೆಂದರೆ ವಸ್ತುಗಳನ್ನು ಸುಡುವುದು ಅಥವಾ ವ್ಯಯ ಮಾಡುವುದಲ್ಲ, ಅವುಗಳ ಶಕ್ತಿಯನ್ನು ಹೆಚ್ಚಿಸುವುದು!

2 comments:

  1. Respected Sir/Medam,

    Please send me a information about how do ekadashi i think it will come two times in a month.

    ReplyDelete
    Replies
    1. ನಮಸ್ಕಾರ, ನಾಳೆ (13.11.2013) ಏಕಾದಶಿ ಇದೆ. ಏಕಾದಶಿಯ ಬಗ್ಗೆ ಓದಿ - http://dharmagranth.blogspot.com/2012/12/ekadashi.html

      Delete

Note: only a member of this blog may post a comment.