ಸನಾತನ-ನಿರ್ಮಿತ ದೇವತೆಗಳ ಸಾತ್ತ್ವಿಕ ‘ಚಿತ್ರ’ ಮತ್ತು ‘ನಾಮಪಟ್ಟಿ’

ಸನಾತನ-ನಿರ್ಮಿತ ‘ಸಾತ್ತ್ವಿಕ ನಾಮಪಟ್ಟಿ’: ಅಕ್ಷರಗಳು ಸಾತ್ತ್ವಿಕವಿದ್ದರೆ ಅದರಲ್ಲಿ ಚೈತನ್ಯವಿರುತ್ತದೆ. ಸಾತ್ತ್ವಿಕ ಅಕ್ಷರಗಳು ಮತ್ತು ಅವುಗಳ ಸುತ್ತಲೂ ದೇವತೆಯ ತತ್ತ್ವಕ್ಕೆ ಅನುರೂಪವಾಗಿರುವ ಚೌಕಟ್ಟುಗಳಿಂದ ಕೂಡಿರುವ ಆಯಾ ದೇವತೆಯ ನಾಮಪಟ್ಟಿಗಳನ್ನು ಸನಾತನವು ತಯಾರಿಸುತ್ತದೆ. ಈ ನಾಮಪಟ್ಟಿಗಳು ಆಯಾ ದೇವತೆಯ ತತ್ತ್ವವನ್ನು ಹೆಚ್ಚು ಪ್ರಮಾಣದಲ್ಲಿ ಆಕರ್ಷಿಸುತ್ತವೆ ಮತ್ತು ಪ್ರಕ್ಷೇಪಿಸುತ್ತವೆ. ಸನಾತನವು ಇಷ್ಟರವರೆಗೆ ವಿವಿಧ ದೇವತೆಗಳ ಒಟ್ಟು 80ಕ್ಕಿಂತ ಹೆಚ್ಚು ನಾಮಪಟ್ಟಿಗಳನ್ನು ತಯಾರಿಸಿದೆ.


ದೇವತೆಗಳ ನಾಮಪಟ್ಟಿಗಳಿಂದಾಗುವ ಲಾಭಗಳು 

1. ದೇವತೆಗಳ ನಾಮಪಟ್ಟಿಗಳನ್ನು ಮನೆಯಲ್ಲಿ ಅಥವಾ ಕಛೇರಿಯಲ್ಲಿ ನಾವು ಕೆಲಸ ಮಾಡುವ ಕಡೆ ಅಥವಾ ನಾವು ಓಡಾಡುವಲ್ಲಿ ಕಣ್ಣುಗಳೆದುರು ಕಾಣಿಸುವಂತೆ ಹಾಕುವುದರಿಂದ ನಮಗೆ ಆಯಾ ದೇವತೆಯ ನೆನಪಾಗುತ್ತದೆ ಮತ್ತು ಇದರಿಂದ ಆ ದೇವರ ನಾಮಜಪ ಮಾಡಲು ಸುಲಭವಾಗುತ್ತದೆ.

2. ಮನೆಯಲ್ಲಿ ನಾಲ್ಕೂ ದಿಕ್ಕಿನಲ್ಲಿ ವಿಶಿಷ್ಟ ದಿಕ್ಕಿನಲ್ಲಿ ವಿಶಿಷ್ಟ ದೇವತೆಗಳ ನಾಮಪಟ್ಟಿಗಳನ್ನು ಹಾಕುವುದರಿಂದ ವಾಸ್ತುಶುದ್ಧಿಯಾಗುತ್ತದೆ. ಇದರ ಬಗ್ಗೆ ವಿವರವಾಗಿ ಓದಿ.

3. ರಾತ್ರಿ ಮಲಗುವಾಗ ಶ್ರೀ ಗಣಪತಿ ಮತ್ತು ಶ್ರೀಕೃಷ್ಣನ ನಾಮಜಪದ ಮಂಡಲವನ್ನು ಹಾಕಿ ಮಲಗುವುದರಿಂದ ನಿದ್ರೆಯ ವಿಕಾರಗಳು, ಉದಾ. ನಿದ್ರೆಯಲ್ಲಿ ಭಯಾನಕ ಕನಸುಗಳು ಬೀಳುವುದು, ಕೂಗಾಡುವುದು, ಸುತ್ತಮುತ್ತಲೂ ಯಾರಾದರೂ ಇದ್ದಾರೆ ಎಂದೆನಿಸುವುದು, ನೆರಳು ಕಾಣಿಸುವುದು ಮುಂತಾದ ಅನೇಕ ತೊಂದರೆಗಳು ನಾಶವಾಗುತ್ತವೆ.

ಸನಾತನ ಸಂಸ್ಥೆಯು ದೇವತೆಗಳ ಚಿತ್ರ ಅಥವಾ ನಾಮಪಟ್ಟಿಗಳನ್ನು ಹೇಗೆ ತಯಾರಿಸಿದೆ?

ಪ್ರತಿಯೊಂದು ದೇವತೆಯು ಒಂದು ವಿಶಿಷ್ಟ ತತ್ತ್ವವಾಗಿದೆ. ದೇವತೆಯ ದ್ವಿಮಿತಿಯ ರೂಪ (ಚಿತ್ರ) ಅಥವಾ ತ್ರಿಮಿತಿಯ ರೂಪ (ಮೂರ್ತಿ) ಆ ದೇವತೆಯ ಮೂಲ ರೂಪದೊಂದಿಗೆ ಎಷ್ಟು ಹೊಂದಾಣಿಕೆಯಾಗುತ್ತದೆಯೋ, ಅಷ್ಟು ಆ ದೇವತೆಯ ತತ್ತ್ವವು ಹೆಚ್ಚಿಗೆ ಆಕರ್ಷಿಸುತ್ತದೆ. ದೇವತೆಯ ತತ್ತ್ವವು ರೂಪದಲ್ಲಿ ಎಷ್ಟು ಹೆಚ್ಚಿಗೆ ಇರುತ್ತದೆಯೋ, ಅಷ್ಟು ಭಕ್ತಿಭಾವವು ಪೂಜೆ ಮಾಡುವವರಲ್ಲಿ ಬೇಗನೇ ಜಾಗೃತವಾಗಲು ಸಹಾಯವಾಗುತ್ತದೆ. ಹಾಗೆಯೇ ಇಂತಹ ರೂಪದಿಂದ ದೇವತೆಯ ಸ್ಪಂದನಗಳು ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿತವಾಗುವುದರಿಂದ ವಾತಾವರಣವೂ ಸಾತ್ತ್ವಿಕವಾಗುತ್ತದೆ. ಸನಾತನ ಸಂಸ್ಥೆಯ ಸಾಧಕರು ಅಧ್ಯಾತ್ಮಶಾಸ್ತ್ರಕ್ಕನುಸಾರ, ಪ.ಪೂ.ಡಾ.ಜಯಂತ ಬಾಳಾಜಿ ಆಠವಲೆ (ಸಂಕಲನಕಾರರ) ಯವರ ಮಾರ್ಗದರ್ಶನದಡಿಯಲ್ಲಿ ಸೂಕ್ಷ್ಮ ಸ್ಪಂದನಶಾಸ್ತ್ರದ ಸುಯೋಗ್ಯ ಅಧ್ಯಯನ ಮಾಡಿ ಸಾತ್ತ್ವಿಕ ಮತ್ತು ಆಯಾಯ ದೇವತೆಯ ಹೆಚ್ಚೆಚ್ಚು ತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿತಗೊಳಿಸುವಂತಹ ಚಿತ್ರಗಳು, ಮೂರ್ತಿ ಮತ್ತು ನಾಮಪಟ್ಟಿಗಳನ್ನು ನಿರ್ಮಿಸುತ್ತಾರೆ. (ಶಿವ, ಹನುಮಂತ (ಮಾರುತಿ), ಶ್ರೀಕೃಷ್ಣ, ಶ್ರೀರಾಮ, ದತ್ತ, ಗಣಪತಿ ಶ್ರೀಲಕ್ಷ್ಮೀ ಮತ್ತು ಶ್ರೀ ದುರ್ಗಾದೇವಿ ಈ ದೇವತೆಗಳ ಬೇರೆಬೇರೆ ಆಕಾರದಲ್ಲಿನ ಸಾತ್ತ್ವಿಕ ಚಿತ್ರಗಳು ಮತ್ತು ನಾಮಪಟ್ಟಿಗಳನ್ನು ಸನಾತನವು ತಯಾರಿಸಿದೆ.)


(ಇಲ್ಲಿ ನೀಡಿದ ದತ್ತನ ಸಾತ್ತ್ವಿಕ ಚಿತ್ರವನ್ನು ಸನಾತನ ಸಂಸ್ಥೆಯು ನಿರ್ಮಿಸಿದೆ. ಈ ಚಿತ್ರದಲ್ಲಿ ದತ್ತತತ್ತ್ವವು ಶೇ. 27.5 ರಷ್ಟಿದೆ. ಇತರೆಡೆಗಳಲ್ಲಿ ಸಿಗುವ ದತ್ತನ ಚಿತ್ರದಲ್ಲಿ ಹೆಚ್ಚೆಂದರೆ 1-2% ರಷ್ಟೇ ಸಾತ್ತ್ವಿಕತೆಯಿರುತ್ತದೆ.)

No comments:

Post a Comment

Note: only a member of this blog may post a comment.