ಕಾರ್ತಿಕ ಏಕಾದಶಿ

ಕಾರ್ತಿಕ ಏಕಾದಶಿಯೆಂದರೆ ಸಂಪ್ರದಾಯದ ಮಿತಿಯನ್ನು ದಾಟಿ ಶ್ರೀವಿಷ್ಣು ಮತ್ತು ಶಿವ ಇವರ ಐಕ್ಯವನ್ನು ಅನುಭವಿಸುವ ವ್ರತ!: ‘ಕಾರ್ತಿಕ ಏಕಾದಶಿಯ ಮಹತ್ವವೆಂದರೆ ಈ ದಿನ ಶ್ರೀವಿಷ್ಣುವಿಗೆ ಬಿಲ್ವಪತ್ರೆಗಳನ್ನು ಅರ್ಪಿಸಿದರೂ ನಡೆಯು ತ್ತದೆ ಮತ್ತು ಶಿವನಿಗೆ ತುಳಸಿಯನ್ನು ಅರ್ಪಿಸಲು ಸಾಧ್ಯವಾಗುತ್ತದೆ. ಇದು ಹೀಗೇಕೆ? ಒಂದೋ ಇದು ‘ಹರಿ ಮತ್ತು ಹರ’ ಅಂದರೆ ‘ಶ್ರೀವಿಷ್ಣು ಮತ್ತು ಶಿವ’ ಇವರಿಬ್ಬರ ಅದ್ವೈತವನ್ನು ತೋರಿಸುತ್ತದೆ. ಇನ್ನೊಂದೆಂದರೆ (ಅಧ್ಯಾತ್ಮಶಾಸ್ತ್ರೀಯ ಕಾರಣ) ಕಾಲಮಹಾತ್ಮೆಗನುಸಾರ ಈ ದಿನ ಬಿಲ್ವಪತ್ರೆಯಲ್ಲಿ ಶ್ರೀವಿಷ್ಣುವಿನ ಪವಿತ್ರಕಗಳು, ಹಾಗೆಯೇ ತುಳಸಿಯಲ್ಲಿ ಶಿವನ ಪವಿತ್ರಕಗಳನ್ನು ಆಕರ್ಷಿಸುವ ಕ್ಷಮತೆ ನಿರ್ಮಾಣವಾಗುತ್ತದೆ. ಆದ್ದರಿಂದ ಈ ದಿನ ಶಿವನಿಗೆ ತುಳಸಿ ಮತ್ತು ಶ್ರೀವಿಷ್ಣುವಿಗೆ ಬಿಲ್ವಪತ್ರೆಯನ್ನು ಅರ್ಪಿಸಬಹುದು.

ಈಶ್ವರಪ್ರಾಪ್ತಿಗಾಗಿ ಪ್ರಯತ್ನಿಸುವ ಭಕ್ತರು ‘ಶೈವ-ವೈಷ್ಣವ’ ಭೇದದ ಆಧಾರದಲ್ಲಿ ಪರಸ್ಪರರನ್ನು ವಿರೋಧಿಸುವುದೆಂದರೆ, ಅವರ ಸಂಕುಚಿತ ವೃತ್ತಿ ಮತ್ತು ಈಶ್ವರನ ಬಗೆಗಿನ ಅಜ್ಞಾನದ ದ್ಯೋತಕವಾಗಿದೆ. ಈ ಅಜ್ಞಾನವು ದೂರವಾಗಬೇಕು, ಹಾಗೆಯೇ ಭಕ್ತನು ಸಂಕುಚಿತ ವೃತ್ತಿಯನ್ನು ತ್ಯಜಿಸಿ (ಸ್ವಸಂಪ್ರದಾಯದ ಮಿತಿಯನ್ನು ದಾಟಿ) ಶ್ರೀವಿಷ್ಣು ಮತ್ತು ಶಿವ ಇವರಿಬ್ಬರ ಐಕ್ಯವನ್ನು ಅನುಭವಿಸಬೇಕು, ಇದು ಈ ವ್ರತದ ಮಹತ್ವದ ಉದ್ದೇಶವಾಗಿದೆ; ಏಕೆಂದರೆ ಈಶ್ವರನು ಸಂಪ್ರದಾಯದವನಾಗಿರದೇ ಅವನು ಎಲ್ಲ ಬಂಧನಗಳ ಆಚೆಗಿರುತ್ತಾನೆ.’ - ಪೂ. (ಡಾ.) ಚಾರುದತ್ತ ಪಿಂಗಳೆ, ಸನಾತನ ಆಶ್ರಮ, ರಾಮನಾಥಿ, ಗೋವಾ.
 
(ಆಧಾರ : ಸನಾತನ ಸಂಸ್ಥೆಯು ಮುದ್ರಿಸಿದ ಗ್ರಂಥ ‘ವಿಠ್ಠಲ’)

No comments:

Post a Comment

Note: only a member of this blog may post a comment.