ದೇವಿಯ ದೇವಸ್ಥಾನದ ಮುಂದೆ ಕುಂಕುಮದ ರಾಶಿಯನ್ನು ಏಕೆ ಇಡುತ್ತಾರೆ?

ಅರ್ಚನೆಯನ್ನು ಮಾಡುವುದರಿಂದ ದೇವತೆಗಳಿಗೆ ಪಂಚತತ್ತ್ವದಲ್ಲಿ ಕಾರ್ಯ ಮಾಡಲು ಶಕ್ತಿಯು ಸಿಗುತ್ತದೆ. ಹಿಂದಿನ ಕಾಲದಲ್ಲಿ (ಸತ್ಯಯುಗ, ತ್ರೇತಾಯುಗ ಮತ್ತು ದ್ವಾಪರಯುಗ) ದೇವತೆಗಳ ದೇವಸ್ಥಾನಗಳ ಎದುರಿನಲ್ಲಿ ಬ್ರಾಹ್ಮೀಮುಹೂರ್ತದಲ್ಲಿ ಶುದ್ಧ ಕುಂಕುಮದ ರಾಶಿಗಳು ಇರುತ್ತಿದ್ದವು. (ಬ್ರಾಹ್ಮೀಮುಹೂರ್ತದಲ್ಲಿ ದೇವತೆಗಳ ಪವಿತ್ರಕಗಳು ಹೆಚ್ಚು ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಪ್ರಕ್ಷೇಪಿತವಾಗುತ್ತವೆ.) ದೇವಿಯ ತತ್ತ್ವವು ದೇವಸ್ಥಾನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬರಬೇಕೆಂದು ಬೆಳಗಿನ ಸಮಯದ ಆರತಿಯ ಸಮಯದಲ್ಲಿ ದೇವಿಗೆ ಇಷ್ಟವಾದಂತಹ ಶುದ್ಧ ಕುಂಕುಮದ ರಾಶಿಯನ್ನು ದೇವಸ್ಥಾನದ ಮುಖ್ಯದ್ವಾರದಲ್ಲಿ ಇಡುತ್ತಿದ್ದರು. ಆರತಿಯ ನಂತರ ಭಕ್ತರು ದೇವಸ್ಥಾನದಿಂದ ಹೊರಗೆ ಬಂದು ಕುಂಕುಮದ ರಾಶಿಯ ಮೇಲೆ ದೇವಿಯ ಚರಣಗಳು ಮೂಡಿವೆಯೇನು ಎಂದು ನೋಡುತ್ತಿದ್ದರು ಮತ್ತು ಯಾವ ಕುಂಕುಮದ ರಾಶಿಯ ಮೇಲೆ ದೇವಿಯ ಚರಣಗಳು ಮೂಡಿವೆಯೋ, ಆ ಕುಂಕುಮದ ರಾಶಿಯಲ್ಲಿನ ಕುಂಕುಮವನ್ನು ಒಂದು ಮುಷ್ಟಿಯಷ್ಟು ತೆಗೆದುಕೊಂಡು ಹೋಗುತ್ತಿದ್ದರು. ಇದಕ್ಕೆ ‘ಕುಂಕುಮವನ್ನು ಲೂಟಿ ಮಾಡುವುದು’ ಎಂದು ಹೇಳುತ್ತಾರೆ. ದೇವಿಯ ಚರಣಸ್ಪರ್ಶದಿಂದ ಪಾವನವಾದ ಮತ್ತು ದೇವಿಯ ಶಕ್ತಿಯು ಪ್ರಾಪ್ತವಾದ ಕುಂಕುಮವನ್ನೇ ಆ ಕಾಲದಲ್ಲಿ ಭಕ್ತರು ತಮ್ಮ ಹಣೆಯ ಮೇಲೆ ಹಚ್ಚಿಕೊಳ್ಳುತ್ತಿದ್ದರು.

(ಈಗಲೂ ದೇವಿಯ ದೇವಸ್ಥಾನಗಳ ಹೊರಗಡೆ ಕುಂಕುಮದ ರಾಶಿಗಳು ಇರುತ್ತವೆ; ಆದರೆ ಆ ಕುಂಕುಮವು ಕಲಬೆರಕೆಯದ್ದಾಗಿರುತ್ತದೆ ಮತ್ತು ಅದನ್ನು ಮಾರಾಟಕ್ಕಾಗಿ ಇಟ್ಟಿರುತ್ತಾರೆ. ಯುಗಗಳು ಕಳೆದಂತೆ ಕುಂಕುಮದ ಸಾತ್ತ್ವಿಕತೆಯು ಕಡಿಮೆಯಾಗುತ್ತಾ ಹೋಯಿತು. ಕಲಿಯುಗದಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ಸಾತ್ತ್ವಿಕ ಕುಂಕುಮವನ್ನು ತಯಾರಿಸುತ್ತಿದ್ದಾರೆ. ದೇವಸ್ಥಾನದ ಎದುರಿನಲ್ಲಿರುವ ಕುಂಕುಮದ ರಾಶಿಯ ವ್ಯಾಪಾರೀಕರಣವಾಗಿದೆ. ಕುಂಕುಮದ ರಾಶಿಯಲ್ಲಿ ದೇವಿಯ ತತ್ತ್ವ ಬರುವುದು ಇತ್ಯಾದಿ ವಿಷಯಗಳು ಯಾರಿಗೂ ತಿಳಿದೇ ಇಲ್ಲ. ಕೇವಲ ಹಣಕ್ಕಾಗಿ ಮತ್ತು ಸ್ವಾರ್ಥಕ್ಕಾಗಿ ಕುಂಕುಮದ ರಾಶಿಯನ್ನು ಇಡುತ್ತಾರೆ. ಆದುದರಿಂದ ದೇವಿಯ ತತ್ತ್ವವು ಎಷ್ಟು ಪ್ರಮಾಣದಲ್ಲಿ ಬಂದು ಭಕ್ತರಿಗೆ ಲಾಭವಾಗಬೇಕಾಗಿತ್ತೋ ಅದು ಆಗುವುದಿಲ್ಲ.)

(ಸನಾತನ ಸಂಸ್ಥೆಯು ಜನರಿಗೆ ಶುದ್ಧ ಕುಂಕುಮವೇ ಸಿಗಬೇಕು ಮತ್ತು ಅದರಿಂದ ಆಧ್ಯಾತ್ಮಿಕ ಲಾಭವಾಗಬೇಕೆಂದು ಶುದ್ಧ ಕುಂಕುಮ ತಯಾರಿಸಿದೆ. ಕುಂಕುಮವು ಶುದ್ಧವಾಗಿದೆ ಮತ್ತು ಹಚ್ಚಿಕೊಳ್ಳುವುದರಿಂದ ಒಳ್ಳೆಯ ಅನುಭವವಾಗಿದೆ ಎಂದು ಈಗಾಗಲೇ ಸನಾತನದ ಕುಂಕುಮವನ್ನು ಉಪಯೋಗಿಸುತ್ತಿರುವ ಸಾವಿರಾರು ಜನರ ಅಭಿಪ್ರಾಯವಾಗಿದೆ. ಕುಂಕುಮಕ್ಕಾಗಿ ಸಂಪರ್ಕಿಸಿ: 9342599299)

(ಆಧಾರ : ಸನಾತನ ಸಂಸ್ಥೆಯ ಗ್ರಂಥ)

ಸಂಬಂಧಿತ ವಿಷಯಗಳು
ಪೂಜೆಯಲ್ಲಿ ನಿಷಿದ್ಧ ಹೂವುಗಳು ಮತ್ತು ಹೂವು ಕೀಳುವುದರ ಬಗ್ಗೆ ಮಹತ್ವಪೂರ್ಣ ಅಂಶಗಳು
ದೇವತೆಗೆ ಅರ್ಪಿಸುವ ಹೂವನ್ನು ಹೇಗೆ ಕೀಳಬೇಕು?
ಸೂರ್ಯಾಸ್ತದ ನಂತರ ಮೊಗ್ಗುಗಳನ್ನು ಏಕೆ ಕೀಳಬಾರದು?
ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ
ದೇವಸ್ಥಾನದ ಮಹತ್ವ
ದೇವರಿಗೆ ಅರ್ಪಿಸುವ ಹೂವುಗಳ ಪರಿಮಳವನ್ನು ಏಕೆ ತೆಗೆದುಕೊಳ್ಳಬಾರದು?
ದೇವರಕೋಣೆ/ಮಂಟಪ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಏಕೆ ಇಡಬೇಕು?
ಭಗವಂತನ ವಿಚಾರವನ್ನು ಮಾಡದೇ ಮಾಡಿದ ವ್ಯಾಪಾರವು ಯಾವಾಗಲೂ ನಷ್ಟದಲ್ಲಿಯೇ ಇರುತ್ತದೆ!
ದೇವತೆಗಳಿಗೆ ಜನಿವಾರವನ್ನು ಅರ್ಪಿಸುವ ಹಿಂದಿನ ಶಾಸ್ತ್ರವೇನು?
ದೇವರ ಮಂಟಪದಲ್ಲಿ ದೇವರ ಜೋಡಣೆಯನ್ನು ಹೇಗೆ ಮಾಡಬೇಕು?
ಪೂಜಾ ಉಪಕರಣಗಳು ತಾಮ್ರದಿಂದ ಏಕೆ ತಯಾರಿಸಬೇಕು?
ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?
ಕಾಲುಗಳನ್ನು ತೊಳೆದುಕೊಂಡು ದೇವಸ್ಥಾನವನ್ನು ಏಕೆ ಪ್ರವೇಶಿಸಬೇಕು?
ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಯೋಗ್ಯ ಪದ್ಧತಿ
ದೇವಸ್ಥಾನದಲ್ಲಿ ದೇವರ ಎದುರು ಇರುವ ಆಮೆಯ ಪ್ರತಿಮೆಯ ಬದಿಯಲ್ಲಿ ನಿಂತು ಏಕೆ ದರ್ಶನ ಪಡೆಯಬೇಕು?

No comments:

Post a Comment

Note: only a member of this blog may post a comment.